Palah Biswas On Unique Identity No1.mpg

Unique Identity No2

Please send the LINK to your Addresslist and send me every update, event, development,documents and FEEDBACK . just mail to palashbiswaskl@gmail.com

Website templates

Zia clarifies his timing of declaration of independence

what mujib said

Jyothi Basu Is Dead

Unflinching Left firm on nuke deal

Jyoti Basu's Address on the Lok Sabha Elections 2009

Basu expresses shock over poll debacle

Jyoti Basu: The Pragmatist

Dr.BR Ambedkar

Memories of Another day

Memories of Another day
While my Parents Pulin Babu and basanti Devi were living

"The Day India Burned"--A Documentary On Partition Part-1/9

Partition

Partition of India - refugees displaced by the partition

Sunday, March 11, 2012

Fwd: [lingayat@facebook] ಅಸಮಾನತೆ, ದೌರ್ಜನ್ಯ, ತುಳಿತ ಮುಂತಾದವುಗಳ ವಿರುದ್ಧ...



---------- Forwarded message ----------
From: Namma Anna Basavanna <notification+kr4marbae4mn@facebookmail.com>
Date: 2012/3/12
Subject: [lingayat@facebook] ಅಸಮಾನತೆ, ದೌರ್ಜನ್ಯ, ತುಳಿತ ಮುಂತಾದವುಗಳ ವಿರುದ್ಧ...
To: "lingayat@facebook" <206207066095610@groups.facebook.com>


Namma Anna Basavanna posted in lingayat@facebook.
ಅಸಮಾನತೆ, ದೌರ್ಜನ್ಯ, ತುಳಿತ ಮುಂತಾದವುಗಳ ವಿರುದ್ಧ...
Namma Anna Basavanna 11:02am Mar 12
ಅಸಮಾನತೆ, ದೌರ್ಜನ್ಯ, ತುಳಿತ ಮುಂತಾದವುಗಳ ವಿರುದ್ಧ ಧ್ವನಿಯೆತ್ತಿ, ಸಾಮಾಜಿಕ ತಾರತಮ್ಯ ವ್ಯವಸ್ಥೆಯ ವಿರುದ್ಧ ಸಮರ ಸಾರಿ, ಸಮಾಜ ಸುಧಾರಣೆಗೆ, ಸಮಾನತೆಗೆ ಹೋರಾಟ ಮಾಡಿದವರು ಚನ್ನಬಸವಣ್ಣ.

12ನೇ ಶತಮಾನದಲ್ಲಿ ವಚನ ಸಾಹಿತ್ಯವು ಮೇರು ಸ್ಥಿತಿಯಲ್ಲಿತ್ತು. ಅದರಲ್ಲಿಯೂ ಬಸವ ಕಲ್ಯಾಣದಲ್ಲಿ ನಡೆಯುತ್ತಿದ್ದ ಅನುಭವ ಮಂಟಪ ಎಂಬ ಚರ್ಚಾ ವೇದಿಕೆಯಲ್ಲಿ ಅಲ್ಲಮಪ್ರಭು, ಅಕ್ಕ ಮಹಾದೇವಿ, ಬಸವಣ್ಣ ಮುಂತಾದ ಮಹಾನ್ ಶರಣಶ್ರೇಷ್ಠರೊಂದಿಗೆ ಚನ್ನ ಬಸವಣ್ಣ ಅವರ ಹೆಸರು ಕೂಡ ಕೇಳಿಬರುತ್ತದೆ. ಅಂದರೆ ಈ ಶಿವಶರಣರ ಸಮಕಾಲೀನರು ಚನ್ನ ಬಸವಣ್ಣ ಎಂಬುದು ಸ್ಪಷ್ಟವಾಗುತ್ತದೆ.

ಚನ್ನ ಬಸವಣ್ಣ ಜೀವಿಸಿದ್ದು ಬಲು ಕಡಿಮೆ ಅವಧಿಗೆ ಎಂಬುದು ಇತಿಹಾಸಕಾರರಿಂದ ಲಭ್ಯವಾಗುವ ಮಾಹಿತಿ. ಕೇವಲ ಇಪ್ಪತ್ತ ನಾಲ್ಕುವರ್ಷ ಇವರು ಜೀವಿಸಿದ್ದರಾದರೂ, ಅವರು ಪಸರಿಸಿದ ಧರ್ಮ ಜಾಗೃತಿ, ಸಾಮಾಜಿಕ ಬದಲಾವಣೆಯ ಕೈಂಕರ್ಯಗಳು ಚಿರಸ್ಥಾಯಿ.

ಅಸಮಾನತೆ, ದೌರ್ಜನ್ಯ, ತುಳಿತ ಮುಂತಾದವುಗಳ ವಿರುದ್ಧ ಧ್ವನಿಯೆತ್ತಿ, ಸಾಮಾಜಿಕ ತಾರತಮ್ಯ ವ್ಯವಸ್ಥೆಯ ವಿರುದ್ಧ ಸಮರ ಸಾರಿ, ಸಮಾಜ ಸುಧಾರಣೆಗೆ, ಸಮಾನತೆಗೆ ಹೋರಾಟ ಮಾಡಿದವರು ಚನ್ನಬಸವಣ್ಣ. ಇವರು ಶರಣಶ್ರೇಷ್ಠರಾದ ಬಸವಣ್ಣ ಅವರ ಸೋದರಳಿಯ. ಹೆಸರಿನಲ್ಲಿ ಹೋಲಿಕೆಯಿರುವುದರಿಂದ ಮತ್ತು ಬಸವಣ್ಣ ಅವರ ಸೋದರಳಿಯ ಎಂಬ ಕಾರಣಕ್ಕೆ ಇವರು ಪ್ರಸಿದ್ಧರಾಗಿದ್ದಲ್ಲ ಎನ್ನುವುದನ್ನು ಅವರ ವಚನಗಳನ್ನು ಓದಿದ ಯಾರು ಕೂಡ ಅರ್ಥೈಸಿಕೊಳ್ಳಬಲ್ಲರು. ಇವರು ಸ್ವಯಂ ಸಾಮರ್ಥ್ಯ ಮತ್ತು ಸಾಧನೆಗಳಿಂದಲೇ ಕೀರ್ತಿ ಸಂಪಾದಿಸಿದ್ದರು.

ಚನ್ನಬಸವಣ್ಣ ಅವರ ತಾಯಿಯ ಬಗ್ಗೆ ಸಾಕಷ್ಟು ಮಾಹಿತಿಗಳು ದೊರೆಯುತ್ತವಾದರೂ, ತಂದೆಯ ಬಗ್ಗೆ ಅಷ್ಟೇನೂ ವಿವರಗಳು ಲಭಿಸುವುದಿಲ್ಲ. ಅನ್ಯ ವಚನಕಾರರ ವಚನಗಳಿಂದ ಮತ್ತು ಇತರ ಸಾಹಿತ್ಯಗಳಿಂದ ಚೆನ್ನ ಬಸವಣ್ಣ ಅವರ ತಾಯಿ ಅಕ್ಕ ನಾಗಾಯಿ ಅಥವಾ ನಾಗಲಾಂಬಿಕೆ ಎಂದು ತಿಳಿದುಬರುತ್ತದೆ. ಆದರೆ ತಂದೆ ಕುರಿತು ಹಲವಾರು ಕಾಲ್ಪನಿಕ ವಿಚಾರಗಳು ಲಭ್ಯವಾಗುತ್ತವೆ. ವಿಶೇಷವಾಗಿ ಹೇಳಬಹುದಾದರೆ ಕ್ರಿಸ್ತ ಶಕ 1425ರಲ್ಲಿ ಲಕ್ಕಣ್ಣ ದಂಡೇಶನು ತನ್ನ ಶಿವತತ್ವ ಚಿಂತಾಮಣಿ ಎಂಬ ಕೃತಿಯಲ್ಲಿ ಉಲ್ಲೇಖಿಸಿದಂತೆ, ಶರಣರ ಪ್ರಸಾದ ಸೇವನೆಯಿಂದಾಗಿ ನಾಗಲಾಂಬಿಕೆಯು ಗರ್ಭ ಧರಿಸುತ್ತಾಳೆ, ತತ್ಫಲವಾಗಿ ಚನ್ನಬಸವಣ್ಣ ಅವರ ಜನನವಾಗುತ್ತದೆ ಎಂಬ ಮಾಹಿತಿಯಿದೆ. ಮತ್ತೆ ಕೆಲವೆಡೆ ಲಭ್ಯವಾಗುವ ಮಾಹಿತಿಯ ಪ್ರಕಾರ, ಡೋಹರ ಕಕ್ಕಯ್ಯನ ಒಕ್ಕು ಮಿಕ್ಕ ಪ್ರಸಾದದಿಂದ ಚನ್ನಬಸವಣ್ಣ ಅವರ ಜನ್ಮವಾಯಿತೆಂದು ಹೇಳಲಾಗುತ್ತದೆ. ಆದರೆ ಇಲ್ಲಿ ಒಕ್ಕು ಮಿಕ್ಕ ಪ್ರಸಾದ ಸೇವನೆಯ ಸಿದ್ಧಾಂತವನ್ನು ನಂಬಬಹುದಾದರೆ ಚನ್ನ ಬಸವಣ್ಣ ಅವರ ಜನನವು ಕಲ್ಯಾಣದಲ್ಲಿಯೇ ಸಂಭವಿಸಿತು ಎಂದು ಹೇಳಬೇಕಾಗುತ್ತದೆ. ಇದಕ್ಕೆ ಆ ಕುರಿತ ಕಾಲದ ಹೊಂದಾಣಿಕೆಯಾಗುವುದಿಲ್ಲ. ಯಾಕೆಂದರೆ ಬಸವಣ್ಣನು ಕಲ್ಯಾಣಕ್ಕೆ ಬರುವ ಅವಧಿಯಲ್ಲಿ ಚನ್ನಬಸವಣ್ಣ ಅವರಿಗೆ ಹತ್ತು ಹನ್ನೆರಡು ವರ್ಷಗಳಾದರೂ ಆಗಿರಬೇಕಾಗುತ್ತದೆ ಎಂದು ಇತಿಹಾಸಕಾರರು ವಿಶ್ಲೇಷಿಸಿದ್ದಾರೆ. ಈ ಕಾರಣಕ್ಕೆ ಚನ್ನಬಸವಣ್ಣ ಅವರು ಕೂಡಲ ಸಂಗಮದಲ್ಲಿಯೇ ಜನಿಸಿದ್ದರು ಎಂದು ನಿರ್ಧಾರಕ್ಕೆ ಬರಲಾಗಿದೆ.




ಕ್ರಿಸ್ತ ಶಕ ಸುಮಾರು 1500ರಲ್ಲಿ ಬರೆಯಲಾದ ಸಿಂಗಿರಾಜನ ಸಿಂಗಿರಾಜ ಪುರಾಣ ಎಂಬ ಗ್ರಂಥದಲ್ಲಿ, ಚನ್ನ ಬಸವಣ್ಣನ ತಂದೆಯ ಹೆಸರು ಶಿವಸ್ವಾಮಿ ಅಥವಾ ಶಿವದೇವ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಇತರ ವೀರಶೈ ಪುರಾಣಕಾರರಿಗೆ ಹೋಲಿಸಿದರೆ ಸಿಂಗಿರಾಜನು ಐತಿಹಾಸಿಕ ವಿಷಯಗಳಿಗೆ ಸಂಬಂಧಿಸಿದಂತೆ ಕಾಲ್ಪನಿಕತೆಗಿಂತಲೂ ವಸ್ತು ನಿಷ್ಠತೆಗೆ ಹೆಚ್ಚು ಒತ್ತು ನೀಡಿದ್ದಾನೆ. ಈ ಕಾರಣಕ್ಕೆ ಸಿಂಗಿರಾಜ ಪುರಾಣದಲ್ಲಿ ಉಲ್ಲೇಖವಾದ ವಿಷಯಕ್ಕೆ ಹೆಚ್ಚು ತೂಕವಿದೆ. ಕಾಲಜ್ಞಾನ ವಚನಗಳಲ್ಲಿರುವಂತೆ ಚನ್ನಬಸವಣ್ಣನ ಜನನವು ಕ್ರಿಶ್ತ ಶಕ 1144ರಲ್ಲಿ ನಡೆಯಿತೆಂದೂ, ಅವರು ಕ್ರಿಸ್ತ ಶಕ 1168ರಲ್ಲಿ ಲಿಂಗೈಕ್ಯರಾದರೆಂದೂ ವಿಶ್ಲೇಷಣೆ ಮಾಡಲಾಗಿದೆ. ಹೀಗಾಗಿ ಅವರು ಬದುಕಿದ್ದು 24 ವರ್ಷಗಳು ಮಾತ್ರ ಎಂದು ನಂಬಬಹುದು.

1156ರಲ್ಲಿ ಬಸವ ಕಲ್ಯಾಣದಲ್ಲಿ ಸ್ಥಾಪನೆಗೊಂಡ ಅನುಭವ ಮಂಟಪ ಎಂಬ ವಿದ್ವಜ್ಜನರ ಗೋಷ್ಠಿಯಲ್ಲಿ ಚನ್ನ ಬಸವಣ್ಣ ಅವರು ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಅಲ್ಲಮ ಪ್ರಭು, ಬಸವಣ್ಣ, ಅಕ್ಕ ಮಹಾದೇವಿ ಮುಂತಾದ ಶರಣವರೇಣ್ಯರು ಕೂಡಿ ಸಾಮಾಜಿಕ ಕಳಕಳಿಯಿಂದ ಮತ್ತು ಆಧ್ಯಾತ್ಮ ವಿಚಾರಣಗಳ ಬಗ್ಗೆ ಇಲ್ಲಿ ಬಹುವಾಗಿ ಚರ್ಚಿಸುತ್ತಿದ್ದರು. ಈ ಅನುಭವ ಮಂಟಪಕ್ಕೆ ಚನ್ನ ಬಸವಣ್ಣ ಅವರು ಬಂದಾಗ ಅವರಿಗೆ ಕೇವಲ 12 ವರ್ಷ ಇದ್ದಿರಬಹುದು ಎಂದು ಭಾವಿಸಲಾಗುತ್ತದೆ.

ಸಾಂಪ್ರದಾಯಿಕ ವೀರಶೈವ ಧರ್ಮದ ವಚನಗಳನ್ನು ಪರಿಷ್ಕರಣೆಗೊಳಪಡಿಸಿ, ಷಟ್ ಸ್ಥಲ ಸಂಪ್ರದಾಯಕ್ಕೆ ಹೆಚ್ಚಿನ ಒತ್ತು ನೀಡಿದವರಲ್ಲಿ ಚನ್ನ ಬಸವಣ್ಣ ಅಗ್ರಗಣ್ಯರು. ಇವರ ವಚನಗಳು ಕೂಡ ಹೆಚ್ಚು ಅನುಭಾವಪೂರ್ಣವಾಗಿದ್ದು, ವೀರಶೈವ ಸಿದ್ಧಾಂತಗಳನ್ನು ಸಮರ್ಪಕವಾಗಿ ವಿವರಿಸುತ್ತದೆ. ಅರಿವೇ ಗುರು ಎಂದು ಸ್ಪಷ್ಟ ನಿಲುವು ಹೊಂದಿದ್ದ ಶಿವಶರಣರು ಅನುಭವ ಮಂಟಪದ ವಿಚಾರಗೋಷ್ಠಿಯಲ್ಲಿ ವಿಚಾರ ಮಂಥನ ನಡೆಸಿ, ವೈಚಾರಿಕತೆಗೆ ಆದ್ಯ ಸ್ಥಾನ ನೀಡಿದ್ದಾರೆ.

ಅಪಾರ ಜ್ಞಾನಿ ಚನ್ನ ಬಸವಣ್ಣ ಅವರು ಒಂದೆಡೆ ಹೇಳಿದ್ದಾರೆ – ಆಚಾರವೇ ಜಂಗಮ, ವಿಚಾರವೇ ಭಕ್ತ, ಆಚಾರ – ವಿಚಾರ ಎಂಬುದು ಸ್ವಾನುಭಾವ. ಈ ರೀತಿ, ಶರಣರ ಸೈದ್ಧಾಂತಿಕ ನಿಲುವುಗಳು, ಪರಿಕಲ್ಪನೆಗಳು ಅವರ ವಚನಗಳಲ್ಲಿ ಎದ್ದು ಕಾಣುತ್ತವೆ.

ಮತ್ತೊಂದು ವಚನದಲ್ಲಿ ಅವರು, ಪರಸತಿಯ ಭೋಗಿಸಬಾರದೆಂಬುದು ಜ್ಞಾನ, ಅದನ್ನು ಅರ್ಥೈಸಿಕೊಂಡು ಆಚರಣೆಯಲ್ಲಿ ತರುವುದು ಕ್ರಿಯಾ ಜ್ಞಾನ. ಈ ಜ್ಞಾನ ಮತ್ತು ಕ್ರಿಯೆಗಳ ಸಮ್ಮಿಲವನೇ ನೈಜವಾದ ಸಾಮರಸ್ಯದ ಬಾಳಿಗೆ ಮಾರ್ಗ ಎಂದಿದ್ದಾರೆ.

ಚನ್ನ ಬಸವಣ್ಣ ಕುರಿತು ಪ್ರಭುದೇವ ಅವರು ಈ ರೀತಿ ಹೇಳಿದ್ದಾರೆ: ಚನ್ನಬಸವಣ್ಣ ಅವರು ಭೌತಿಕ ಭೋಗಾದಿಗಳನ್ನು ತ್ಯಜಿಸಿ, ಗುಹೇಶ್ವರನಲ್ಲಿ ಸಂತೃಪ್ತಿಯನ್ನು ಕಂಡಿದ್ದಾರೆ. ಅಚ್ಚ ಗುಣ ಸಂಪನ್ನವಾಗಿರುವ ಚನ್ನಬಸವಣ್ಣನಿಗೆ ನಾನು ನಮಿಸುತ್ತೇನೆ. ತಮ್ಮನ್ನು ಗುಹೇಶ್ವರ ಲಿಂಗನಿಗೆ ಹೋಲಿಸಿಕೊಂಡ ಅವರ ಆಶೀರ್ವಾದವು ಅತ್ಯಂತ ಪರಿಣಾಮಕಾರಿ.

ಸ್ವತಃ ಬಸವಣ್ಣ ಅವರು ತಮ್ಮ ವಚನವೊಂದರಲ್ಲಿ ಈ ರೀತಿ ಹೇಳಿದ್ದಾರೆ: ಚನ್ನಬಸವಣ್ಣ ಅವರ ಎಡ ಪಾದವು ಕಾಯಕದ ಸಂಕೇತ ಮತ್ತು ಬಲ ಪಾದವು ಜ್ಞಾನ ಸಂಕೇತ. ಅವರು ಜ್ಞಾನದ ಸಾಗರವೇ ಆಗಿರುವುದರಿಂದ ಅವರೇ ನನ್ನ ಗುರು.

ಚನ್ನ ಬಸವಣ್ಣ ಅವರು ತಮ್ಮ ಸರಳ ವಚನಗಳ ಮೂಲಕ ಗಮನ ಸೆಳೆದವರು. ಒಂದು ವಚನದಲ್ಲಿ ಅವರು ಹೀಗೆ ಹೇಳಿದ್ದಾರೆ: ಗುಬ್ಬಚ್ಚಿಯೊಂದು ಬೇರೆಯವರ ಗೂಡನ್ನೇ ತನ್ನದು ಎಂದು ಮೂರ್ಖತನದಿಂದ ಹೇಳಿಕೊಳ್ಳುವ ಹಾಗೆ, ಮೂರ್ಖನೊಬ್ಬ ಎಲ್ಲ ಹೊನ್ನು, ಹೆಣ್ಣು ಮತ್ತು ಮಣ್ಣನ್ನು ತನ್ನದೆಂದು ತಿಳಿಯುತ್ತಾನೆ.

ಇನ್ನೊಂದು ವಚನದಲ್ಲಿ ಅವರು ಮನಶುದ್ಧಿ ಇಲ್ಲದಿದ್ದರೆ ಏನು ಫಲ ಎಂದು ಹೀಗೆ ಕೇಳಿದ್ದಾರೆ:

ಕತ್ತೆಯು ಭಕ್ತನಾದರೆ ಏನು ಫಲ
ಅದು ಹೊಲಸು ತಿನ್ನುವುದನ್ನು ಬಿಟ್ಟೀತೇ?
ಬೆಕ್ಕು ಭಕ್ತನಾದೊಡೆ ಏನು ಫಲ,
ಅದು ಇಲಿ ತಿನ್ನುವುದನ್ನು ಬಿಟ್ಟೀತೇ?
ಹಂದಿಯು ಭಕ್ತನಾದರೇನು ಫಲ,
ಅದು ಕೊಳಚೆ ತಿನ್ನುವುದನ್ನು ಬಿಟ್ಟೀತೇ?
ನಾಯಿಯು ಭಕ್ತನಾದರೆ ಏನು ಫಲ,
ಅದು ಹಳಸಿದ ಮಾಂಸ ತಿನ್ನುವುದನ್ನು ಬಿಟ್ಟೀತೇ?

ಎಂದು ಪ್ರಶ್ನಿಸುವ ಮೂಲಕ, ಅಂತರಂಗ ಶುದ್ಧಿ ಇಲ್ಲದಿದ್ದಲ್ಲಿ ಯಾವುದೇ ಫಲ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಚನ್ನಬಸವಣ್ಣ.

ಗುರು – ಶಿಷ್ಯ ಸಂಬಂಧದ ಬಗ್ಗೆ ವಚನವೊಂದರಲ್ಲಿ
ಗುರು ಮತ್ತು ಶಿಷ್ಯರು ಹೇಗಿರಬೇಕೆಂದರೆ
ಬೆಳಕಿನೊಳಗೆ ಅವಿತಿರುವ ಬೆಳಕಿನಂತೆ
ಕನ್ನಡಿಯೊಳಗೆ ಅವಿತಿರುವ ಪಟದಂತೆ
ಸ್ಫಟಿಕದೊಳಗೆ ಅವಿತಿರುವ ಮುತ್ತಿನಂತೆ
ದೇಹದ ನೆರಳಿನ ಹೃದಯದಂತೆ
ಕನ್ನಡಿಗೇ ಕನ್ನಡಿ ಹಿಡಿದಂತೆ ಇರಬೇಕು ಎಂದಿದ್ದಾರೆ ಚನ್ನ ಬಸವಣ್ಣ.

ವಿಚಾರಕ್ರಾಂತಿ, ಆಚಾರಕ್ರಾಂತಿಗಳು ಕಲ್ಯಾಣದ ಶಿವಶರಣರ ಪ್ರಮುಖ ಧ್ಯೇಯಗಳಾಗಿದ್ದವು. ಈ ಧ್ಯೇಯಗಳ ಸಾಧನೆಯ ಜೊತೆಜೊತೆಗೇ ಕನ್ನಡ ಭಾಷೆಯೂ ಸಹ ಶರಣರ ಈ ಮಾದರಿಯ ವಚನಗಳಿಂದಾಗಿ ಹೊಸ ಶಕೆಗೆ, ಸಾಮಾಜಿಕ ಬದಲಾವಣೆಗೆ, ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿವೆ. ಇದರೊಂದಿಗೆ, ಚನ್ನ ಬಸವಣ್ಣ ಅವರು ಕೂಡ ಕನ್ನಡ ಸಾಹಿತ್ಯ ಲೋಕಕ್ಕೆ, ವಿಶೇಷವಾಗಿ ವಚನ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದ್ದಾರೆ.


source::http://www.chandamama.com/lang/story/12/14/26/195/KAN/3/stories.htm

View Post on Facebook · Edit Email Settings · Reply to this email to add a comment.

No comments:

Post a Comment